ಸರ್ಕಾರಿ ನೌಕರರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಸಂವಾದ: ದೊಡ್ಡಬಳ್ಳಾಪುರ ಸೇರಿ 750 ಕಡೆ 2.50 ಲಕ್ಷ ಅಧಿಕಾರಿಗಳು, ನೌಕರರು ಭಾಗಿ
ಬೆಂಗಳೂರು: “ಕಾವೇರಿ ನೀರಿನ ವಿಚಾರದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರವಹಿಸಬೇಕು, ಭಾರತ್ ಜೋಡೋ ಸಂಘ ರಚನೆಗೆ ಗಮನಹರಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದು ಅಧಿಕಾರಿಗಳ ಜೊತೆಗಿನ ಸಂವಾದದ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳು, ನೌಕರರ ಜತೆ ಮಂಗಳವಾರ ಸಂವಾದ ನಡೆಸಿದರು. ಮಂಡ್ಯ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರನ್ನು ಉದ್ದೇಶಿಸಿ “ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು, ಬಿಡಬಾರದು ಎಂಬ ತೀರ್ಮಾನದ ಜವಾಬ್ದಾರಿ ನಮ್ಮದು. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಯಾವುದೇ ಆಹಿತಕರ ಘಟನೆ ನಡೆಯಬಾರದು.
ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಎಂದು ನಿರ್ದೇಶನ ನೀಡಿದರು.“ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಬಿನಿ ಸಂಪೂರ್ಣ ಭರ್ತಿಯಾದರೆ ನೀರು ಹರಿಯುತ್ತದೆ. ಜಲಾಶಯದಲ್ಲಿ ನೀರು ಎಷ್ಟು ಸಂಗ್ರಹವಾಗುತ್ತದೆ ಎನ್ನುವುದರ ಆಧಾರದ ಮೇಲೆ ರೈತರು ಬೆಳೆ ಬೆಳೆಯಬೇಕಾಗುತ್ತದೆ. ಈ ವಿಚಾರದ ಬಗ್ಗೆ ಹಾಗೂ ನೀರಿನ ಸಂಗ್ರಹದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಈಗ ನಾವು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಇಡೀ ವಿಶ್ವದಲ್ಲಿ ಹವಾಮಾನ ವೈಪರೀತ್ಯವಾಗಿದೆ. ಹಾಗಾಗಿ, ವಾಡಿಕೆಯ ಮಳೆ ನಿರೀಕ್ಷೆ ಮಾಡಲು ಆಗುತ್ತಿಲ್ಲ. ಮಳೆ ಬರಬಹುದು, ಬರದೇ ಇರಬಹುದು ಎಂದರು.
‘ಜನ ಮತಹಕ್ಕು ಕಳೆದುಕೊಳ್ಳಬಾರದು’ “ಎಸ್ ಐಆರ್ ಬಗ್ಗೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಜವಾದ ಮತದಾರರು ಯಾವುದೇ ಕಾರಣಕ್ಕೂ ಸಂವಿಧಾನದತ್ತ ಹಕ್ಕನ್ನು ಕಳೆದುಕೊಳ್ಳಬಾರದು. ಅದಕ್ಕೆ ನೆರವಾಗುವುದು ನಿಮ್ಮ ಕರ್ತವ್ಯ‘ ಎಂದರು.
“ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಸಂಘಗಳ ಸ್ಥಾಪನೆ ಹಾಗೂ ಪ್ರಜಾಸೇವೆಯ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯವಿರುವ ಮಾಹಿತಿಗಳನ್ನು ಒಳಗೊಂಡ ಪಾಂಪ್ಲೆಟ್ ಸಿದ್ಧಪಡಿಸಿ ವಿತರಿಸಬೇಕು” ಎಂದು ಸೂಚನೆ ನೀಡಿದರು. Maps
750 ಕಡೆ 2.50 ಲಕ್ಷ ಅಧಿಕಾರಿಗಳು, ನೌಕರರು ಭಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸರ್ಕಾರಿ ನೌಕರರೊಂದಿಗಿನ ವೀಡಿಯೋ ಸಂವಾದವು ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ 750 ಸ್ಥಳಗಳ ನಡೆಯಿತು. ಒಟ್ಟು 2.50 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು.
ಸಂವಾದವು ಆಯಾ ಜಿಲ್ಲೆಯಲ್ಲಿ ಆಗಿರುವ ಕಾರ್ಯಪ್ರಗತಿ ಚಿತ್ರಣವನ್ನು ತೆರೆದಿಟ್ಟಿದ್ದಲ್ಲದೇ ಎದುರಾಗಿರುವ ವಾಸ್ತವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು. ಎಷ್ಟೋ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಅಲ್ಲೇ ಪರಿಹಾರವನ್ನೂ ಸೂಚಿಸಿದರು, ಭವಿಷ್ಯದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದರು. ಎಷ್ಟು ಮತ ಡಿಲೀಟ್ ಮಾಡಿಸಿದ್ಯಮ್ಮ: ಸಿಎಂ ಹಾಸ್ಯ ಚಟಾಕಿ “ತಹಶೀಲ್ದಾರ್ ಅವರೇ, ನಿಮ್ಮಲ್ಲಿ ಎಸ್ ಐಆರ್ ಎಷ್ಟು ಪ್ರಗತಿಯಾಗಿದೆ’
“ಎಲ್ಲಾ ಚೆನ್ನಾಗಿದೆ” ಸಾರ್.
‘ಚೆನ್ನಾಗಿದೆ ಅಂದರೇನಮ್ಮಾ. ಎಷ್ಟು ಓಟ್ ಡಿಲೀಟ್ ಮಾಡಿಸಿದ್ದೀಯ, ಜನರ ಎಷ್ಟು ಉಳಿಸಿದ್ದೀಯ” ?
ಮುಖ್ಯಮಂತ್ರಿಗಳು ಹೀಗೆ ಪ್ರಶ್ನೆ ಕೇಳಿದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೊಳ್ ಎಂದಿತು.
ತಹಶೀಲ್ದಾರರು ಉತ್ತರ ಮುಂದುವರಿಸಿ.
‘ಸಾರ್, ನಮ್ಮ ಕ್ಷೇತ್ರದಲ್ಲಿ 42 ಸಾವಿರ ಓಟ್ ಡಿಲೀಟಾಗಿದೆ‘.
‘ಹಾಗಾದರೆ ನೀವೇಲ್ಲ ಏನ್ ಮಾಡ್ತಾ ಇದ್ದೀರಿ?’ ಬಿಎಲ್ ಒ, ಬಿಎಲ್ ಎ ಏನು ಮಾಡ್ತಿದ್ದಾರೆ? ನಿಜವಾದ ಮತದಾರರಿಗೆ ನೀವು ಹೇಗೆ ನೆರವಾಗುತ್ತಿದ್ದೀರಿ?’ ಎಂದು ಮುಖ್ಯಮಂತ್ರಿಗಳ ಖಡಕ್ಕಾಗಿ ಪ್ರಶ್ನೆಗಳಿಗೆ ಅವಕ್ಕಾದರು.
3 ತಿಂಗಳಿಗೊಮ್ಮೆ ಸಭೆ “ಅಧಿವೇಶನ ಹಾಗೂ ಎಸ್ ಐಆರ್ ಪ್ರಕ್ರಿಯೆ ಮುಕ್ತಾಯ ಬಳಿಕ ಮುಂದಿನ ತಿಂಗಳು ಸಭೆ ಮಾಡಲಾಗುವುದು. ಬಳಿಕ 3 ತಿಂಗಳಿಗೊಮ್ಮೆ ಇಂತಹ ಸಭೆ ಮಾಡಲಾಗುವುದು. ಸರ್ಕಾರ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದ್ದೇವೆ. ಮುಂದಿನ ಸಭೆಯಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಮಾಹಿತಿ ನಮ್ಮ ಮುಂದೆ ಇರಬೇಕು. ನಾವು ಯಾರನ್ನು ಬೇಕಾದರೂ ಆಯ್ಕೆ ಮಾಡಿ ಕರೆ ಮಾಡಿ ಪರಿಶೀಲನೆ ಮಾಡುತ್ತೇವೆ” ಎಂದರು.
“ಈ ಸಭೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಮೇವು ವಿಚಾರ ಚರ್ಚೆ ಮಾಡಿದ್ದೇವೆ. ಎಸ್ ಐ ಆರ್ ವಿಚಾರದಲ್ಲಿ ಜಾತಿ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ನೀಡಲು ಸರ್ಕಾರ ಮುಂದಾಗಿದೆ. ಆದರೆ ಕೇವಲ 50% ಮಾತ್ರ ವಿತರಣೆ ಆಗಿದೆ” ಎಂದರು ನಿರ್ದೇಶನ ನೀಡಿದರು.
“ಎಸ್ಐಆರ್ ನಲ್ಲಿ 1 ಕೋಟಿಗೂ ಹೆಚ್ಚು ಮತದಾರರನ್ನು ತೆಗೆದುಹಾಕಲಾಗುತ್ತಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಬಿಎಲ್ಎ ಗಳಿಗೆ ಸೂಚಿಸಬೇಕು” ಎಂದು ನಿರ್ದೇಶನ ನೀಡಿದರು.
“ಈ ತಿಂಗಳ ಒಳಗೆ ಭಾರತ ಜೋಡೋ ಸಂಘಗಳ ನೋಂದಣಿ ಸದಸ್ಯತ್ವ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ನಾಯಕತ್ವ ಆಯ್ಕೆ ಬಗ್ಗೆ ನಂತರ ತೀರ್ಮಾನ ಮಾಡಲಾಗುವುದು. ಎಲ್ಲಾ ಯುವಕರು, ಎಲ್ಲಾ ಸಮಾಜದವರಿಗೂ ಸಂಘದಲ್ಲಿ ಸದಸ್ಯತ್ವ ಸಿಗಬೇಕು. ಮಾನವೀಯತೆ, ಸೌಹಾರ್ದತೆ ಇರಬೇಕು” ಎಂದು ನಿರ್ದೇಶನ ನೀಡಿದರು.
“ಆರೋಗ್ಯ, ಶಿಕ್ಷಣ ಕೃಷಿ ಸಮಸ್ಯೆ ಬಗ್ಗೆ ಮುಂದೆ ಚರ್ಚೆ ಮಾಡುವೆ. ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಕೊಟ್ಟಿಗೆ ಸೇರಿದಂತೆ ಜನರ ವೈಯಕ್ತಿಕ ಅನುಕೂಲದ ಕಾಮಗಾರಿಗಳಿಗೆ ಆದ್ಯತೆ ನೀಡಿ. ನಂತರ ಸಾರ್ವಜನಿಕ ಕಾಮಗಾರಿ ಯೋಜನೆ ಕೈಗೆತ್ತಿಕೊಳ್ಳಿ. ಈ ವರ್ಷ ಸ್ಥಳೀಯ ಸಂಸ್ಥೆ ಚುನಾವಣೆಗೆ ಸೂಚಿಸಲಾಗಿದೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಿ” ಎಂದು ನಿರ್ದೇಶನ ನೀಡಿದರು.
ದೊಡ್ಡಬಳ್ಳಾಪುರದ ಅಧಿಕಾರಗಳು ಭಾಗಿ ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ಸಂವಾದ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ಭಾಗವಹಿಸಿದ್ದರು.
ಸಂವಾದ ಕಾರ್ಯಕ್ರಮ ಪ್ರಾರಂಭಕ್ಕು ಮುನ್ನ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಅವರು ಮಾಹಿತಿ ನೀಡಿ, ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ನೀಡುವ ಮಾಹಿತಿಯನ್ನು ಆದೇಶದಂತೆ ಪಾಲಿಸುವ ಮೂಲಕ ಕಾರ್ಯಪ್ರವೃತ್ತರಾಗಬೇಕು.
ಇಡೀ ರಾಜ್ಯದ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳು ಈ ಸಂವಾದದಲ್ಲಿ ತಮ್ಮ ತಾಲ್ಲೂಕು ಕೇಂದ್ರಗಳಿಂದಲೇ ಭಾಗವಹಿಸಲಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯೊಂದಿಗೆ ಸದಾ ಸಿದ್ದರಿರಬೇಕು ಎಂದರು.
ಮಳೆ ಕೊರತೆಯಿಂದ ರಾಗಿ ಬಿತ್ತನೆ ಸೇರಿದಂತೆ ಎಲ್ಲಾ ಬೀಜಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಹಾಗಾಗಿ ಸಂವಾದದಲ್ಲಿ ಮುಖ್ಯಮಂತ್ರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಜ್ಜಾಗಬೇಕು ಎಂದು ಹೇಳಿದರು.
ಸಂವಾದ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ಗ್ರೇಡ್ -2 ತಹಶೀಲ್ದಾರ್ ಪ್ರಕಾಶ್, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಡಾ. ಎಂ.ಬಿ.ನವೀನ್ ಕುಮಾರ್, ವಲಯ ಅರಣ್ಯ ಅಧಿಕಾರಿ ಹಂಸವಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್ ಇದ್ದರು.
Most Recent ಕ್ರೈಂ ರೌಂಡಪ್: ಕರಡಿ ದಾಳಿ, ಲಾರಿ ಕಳವು, ಆತ್ಮಹತ್ಯೆ ಸೇರಿದಂತೆ ಪ್ರಮುಖ ಘಟನೆಗಳು ಕ್ರೈಂ ರೌಂಡಪ್: ಕರಡಿ ದಾಳಿ, ಲಾರಿ ಕಳವು, ದೊಡ್ಡಬಳ್ಳಾಪುರ: ಆ.16ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ದೊಡ್ಡಬಳ್ಳಾಪುರ: ಆ.16ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶುಕ್ರವಾರದ ದಿನ ಭವಿಷ್ಯ: 12 ರಾಶಿಗಳಲ್ಲಿ ಇಂದು ಯಾರಿಗೆ ಶುಭಫಲ? ಶುಕ್ರವಾರದ ದಿನ ಭವಿಷ್ಯ: 12 ರಾಶಿಗಳಲ್ಲಿ ಇಂದು ಪ್ರಶ್ನೆಗಳಿಗೆ ಉತ್ತರ ನೀಡದ ಮೋ ಶಾ, ಮುಗಿದೇ ಹೋಯ್ತು ಮುಂಗಾರು ಅಧಿವೇಶನ ಪ್ರಶ್ನೆಗಳಿಗೆ ಉತ್ತರ ನೀಡದ ಮೋ ಶಾ, ಮುಗಿದೇ ಕಾವೇರಿ ನೀರು ವಿವಾದ; ದೊಡ್ಡಬಳ್ಳಾಪುರದಲ್ಲಿ ಬಂದ್‌ಗೆ ಸೀಮಿತವಾಗದ ಕನ್ನಡ ಸಂಘಟನೆಗಳು ಕಾವೇರಿ ನೀರು ವಿವಾದ; ದೊಡ್ಡಬಳ್ಳಾಪುರದಲ್ಲಿ ಬಂದ್‌ಗೆ ಸೀಮಿತವಾಗದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ಹೊಸ ಅಧ್ಯಕ್ಷ, ಸದಸ್ಯರ ನೇಮಕ; ಟಿ. ವೆಂಕಟರಮಣಯ್ಯಗೆ ಅಧ್ಯಕ್ಷ ಸ್ಥಾನ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ಹೊಸ ಅಧ್ಯಕ್ಷ, ಸದಸ್ಯರ ದೊಡ್ಡಬಳ್ಳಾಪುರ: ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಕುರಿತು ಉಪನ್ಯಾಸ ಮಾಲೆ ದೊಡ್ಡಬಳ್ಳಾಪುರ: ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ಕಿತ್ತೂರು ರಾಣಿ ಕರ್ನಾಟಕದ 20 ಅರಣ್ಯ ವಿಭಾಗಗಳಲ್ಲಿ ಆನೆ ಸಂರಕ್ಷಣೆ, ಸಹಬಾಳ್ವೆ ಅಭಿಯಾನ ಕರ್ನಾಟಕದ 20 ಅರಣ್ಯ ವಿಭಾಗಗಳಲ್ಲಿ ಆನೆ ಸಂರಕ್ಷಣೆ, ಕ್ರೈಂ ರೌಂಡಪ್: ದೊಡ್ಡಬಳ್ಳಾಪುರದಲ್ಲಿ ಮಾಂಗಲ್ಯ ಸರ ಕಳವು; ದೂರು ದಾಖಲಿಸಲು ಪೊಲೀಸರ ತಾತ್ಸಾರ ಆರೋಪ..! ಕ್ರೈಂ ರೌಂಡಪ್: ದೊಡ್ಡಬಳ್ಳಾಪುರದಲ್ಲಿ ಮಾಂಗಲ್ಯ ಸರ ಕಳವು; ಕರ್ನಾಟಕ ಬಂದ್: ದೊಡ್ಡಬಳ್ಳಾಪುರದಲ್ಲಿ ರಸ್ತೆಗಿಳಿದ ಪೊಲೀಸರು..! ಕರ್ನಾಟಕ ಬಂದ್: ದೊಡ್ಡಬಳ್ಳಾಪುರದಲ್ಲಿ ರಸ್ತೆಗಿಳಿದ ಪೊಲೀಸರು..! ದಿನ ಭವಿಷ್ಯ: ಗುರುವಾರ, ಆಗಸ್ಟ್ 13, 2026 | ಇಂದಿನಿಂದ ಶ್ರಾವಣ ಮಾಸ ದಿನ ಭವಿಷ್ಯ: ಗುರುವಾರ, ಆಗಸ್ಟ್ 13, 2026 ಇಂದು ಕರ್ನಾಟಕ ಬಂದ್: ದೊಡ್ಡಬಳ್ಳಾಪುರದಲ್ಲಿ ಇಲ್ಲ..! ಇಂದು ಕರ್ನಾಟಕ ಬಂದ್: ದೊಡ್ಡಬಳ್ಳಾಪುರದಲ್ಲಿ ಇಲ್ಲ..!